
ನಿಂತಿಹುದು ಅಚಲವಾಗಿ, ಅಲುಗಾಡದೆ ಭದ್ರವಾಗಿ. ಸಾವಿರಾರು ವರ್ಷಗಳಿಂದ .... ಕಲ್ಲಾಗಿ! ಎತ್ತರದ ಬೆಟ್ಟ ಗುಡ್ಡಗಳ ಮಧ್ಯೆ ಇಹುದು ಗಾಢ ಮೌನ, ಬಲಿತ ಮನ. ಅವುಗಳ ಮನಸ್ಸಿನ ಅಡಿಯಲಿ ನೆಲಸಮವಾಗಿಹುದು ಸಾವಿರಾರು ವರ್ಷಗಳಿಂದ ಹೆಪ್ಪುಗಟ್ಟಿದ ನೂರೆಂಟು ಮಾತು. ಆ ಸುಪ್ತ ಮನಸ್ಸಿನೊಳಗೆ ಏನು ಅಡಗಿಹುದು, ಬಲ್ಲವರು ಯಾರು? ಪ್ರಾಯಶಃ ಪ್ರತಿಧ್ವನಿಸುತ್ತಿದೆ, ಮರುಗಿದ ಹಾಡು, ವೀಣೆಯ ತಂತಿ ಮೀಟಿದ ಹಾಗೆ. ಕೇಳಿಸಿದರು ಕೆಳದಂತಹ, ಕೇಳದಿದ್ದರೂ ಕೆಳಿಸಿದಂತಹ ತರಂಗಗಳನ್ನು ಕೇಳುವ ಕಿವಿ, ಆಲಿಸುವ ಮನ ಎಲ್ಲಾದರೂ ಇದೆಯೇ?

3 comments:
Soooper Nive.. too good.. neva expected ur Kannada to be so good even today :)
Illide bale... just a phone call away... ;-)
But good one..
shabdhagala jodane thumba chennagide bandide... good one...
Post a Comment